ವಿದೇಶ ವಿಹಾರ - 12 - "Indian cuisine"


ಕೈರ್ನ್ಸ್ ನಲ್ಲಿ ಒಂದು ಇಂಡಿಯನ್ ರೆಸ್ಟೋರೆಂಟಿದೆ. ಅಲ್ಲಿಗೆ ನೀವು ಊಟಕ್ಕೆ ಹೋಗಿ ಎಂದು ನಮ್ಮ ಅಳಿಯ ಅಲ್ಲಿನ ಅಡ್ರೆಸ್ ಕೊಟ್ಟಿದ್ದರು.ಹಾಗಾಗಿ ನಮಗೆ ಸಸ್ಯಾಹಾರಿ ಊಟ ಸಿಗುವುದು ತೊಂದರೆ ಆಗಲಿಲ್ಲ.ಆದರೆ ಅಲ್ಲಿಗೆ ಹೋದಾಗ ನಮಗೆ ಇನ್ನೂ ಅಚ್ಚರಿಯಾಗಿದ್ದೆಂದರೆ "ಇಂಡಿಯನ್ ಕ್ಯೂಸಿನ್" ಮಾಲೀಕರು ನಮ್ಮ ಮಂಗಳೂರಿನವರು ಎಂಬುದು.ನಾವು ಕನ್ನಡದಲ್ಲಿ ಮಾತನಾಡುವುದನ್ನು ಕಂಡು ಅವರು ನಮ್ಮನ್ನು ಕನ್ನಡದಲ್ಲಿ ಮಾತನಾಡಿಸಿದಾಗ ನಮಗೆ ಆತ್ಮೀಯತೆ ಹೆಚ್ಚಾಯಿತು.ಅವರು ನಮಗಾಗಿ ೨-೩ ದಿನವೂ ಸಸ್ಯಾಹಾರಿ ಊಟ-ತಿಂಡಿಯನ್ನು ತಯಾರು ಮಾಡಿಕೊಟ್ಟರು.ನಾವು ಸುತ್ತಮುತ್ತಲ ಸ್ಥಳಗಳನ್ನು ನೋಡಿಕೊಂಡು ಊಟಕ್ಕೆ ಇಲ್ಲಿಗೇ ಬರುತ್ತಿದ್ದೆವು.

ಅವರು ಆಸ್ಟ್ರೇಲಿಯಾಕ್ಕೆ ಹೋಗಿ ಇಪ್ಪತೈದು ವರ್ಷಗಳಾದುವಂತೆ.ಮಕ್ಕಳಿಬ್ಬರೂ ಓದಿ ಬೇರೆಡೆ ಕೆಲಸದಲ್ಲಿದ್ದಾರೆ. ಇವರು ಮತ್ತು ಇವರ ಪತ್ನಿ ಇಲ್ಲಿ ಹೋಟೆಲ್ ನಡೆಸುತ್ತಿದ್ದಾರೆ.ಕೆಲಸಕ್ಕೆ ಜನ ಸಿಗದ ಬಿಸಿ ಇವರಿಗೂ ತಟ್ಟಿದೆ. ಯಾರೂ ಸಿಗದಿದ್ದಾಗ ಈ ಗಂಡ-ಹೆಂಡತಿಯೇ ಅಡಿಗೆಯವರು,ಸಪ್ಲೈಯರ್,ಕ್ಲೀನರ್ ಎಲ್ಲವೂ ಆಗಬೇಕಾದ ಅನಿವಾರ್ಯತೆಯನ್ನು ಕೊಂಚ ಬೇಸರದಿಂದಲೇ ತಿಳಿಸಿದರು.

ಹೋಟೆಲ್ಲಿನ ಗೋಡೆಯಲ್ಲಿ ಶಿವಾಜಿ ಮತ್ತು ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಫೋಟೋಗಳನ್ನು ಹಾಕಿದ್ದಾರೆ.ಆ ದೇಶದಲ್ಲಿ ನಮ್ಮವರನ್ನು ಕಂಡು ಸಂತಸವಾಯಿತು. ಕೈರ್ನ್ಸ್ ಪ್ರವಾಸದಲ್ಲಿ ನಮಗೆ ಖುಷಿ ನೀಡಿದ ಅನುಭವಗಳಲ್ಲಿ ಇದೂ ಒಂದು.ವಾಪಾಸಾಗುವಾಗ ಈ ದಂಪತಿಗಳಿಗೆ ಧನ್ಯವಾದ ಸಲ್ಲಿಸಿ ಹೊರಟೆವು.   

2 ಕಾಮೆಂಟ್‌ಗಳು:

  1. ಪ್ರವಾಸದ ಅನುಭವಗಳನ್ನು ಓದಿ ಅನೇಕ ಮಾಹಿತಿಗಳನ್ನು ತಿಳಿಯುವ೦ತಾಯ್ತು. ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನನ್ನ ಅನುಭವಗಳನ್ನು ಓದಿ ಆತ್ಮೀಯವಾಗಿ ಪ್ರತಿಕ್ರಿಯೆ ನೀಡುತ್ತಿರುವ ನಮಗೆ ಧನ್ಯವಾದಗಳು.ಇದು ಹೀಗೇ ಮುಂದುವರೆಯುತ್ತಿರಲಿ ಎಂದು ಆಶಿಸುತ್ತೇನೆ.

      ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.