ವಿದೇಶ ವಿಹಾರ - 18 - ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳ ಕೆಲವು ದೃಶ್ಯಾವಳಿಗಳು


ನಮ್ಮ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಒಳಗಿನ ಕೆಲವು ದೃಶ್ಯಾವಳಿಗಳು


ಜಗತ್ತಿನಲ್ಲಿ ಅತ್ಯುತ್ತಮವಾದ ಮತ್ತು ಬೃಹತ್ತಾದ ಸಿಂಗಪೂರ್ ನ "ಚಾಂಗೀ ಅಂತಾರಾಷ್ಟ್ರೀಯ ವಿಮಾನನಿಲ್ದಾಣ"ದ ಒಳಗಿನ ಕೆಲವು ದೃಶ್ಯಾವಳಿಗಳು.


ವಿಮಾನದಿಂದ ಇಳಿಯುತ್ತಿದ್ದಂತೆಯೇ ನೆಲವೇ ಕಾಣಿಸದಂತೆ ಹಾಸಿದ ಕಾರ್ಪೆಟ್ ನಮ್ಮನ್ನು ಸ್ವಾಗತಿಸುತ್ತದೆ. ಝಗಮಗಿಸುವ ಲೈಟುಗಳು ನಮ್ಮ ಕಣ್ಣನ್ನು ಕೋರೈಸುತ್ತವೆ.ಸಿಂಗಪೂರ್ ವಿಮಾನ ನಿಲ್ದಾಣ ಒಂದು ರೀತಿ ಮಿನಿ ಪ್ರಪಂಚವಿದ್ದಂತೆ.ಎಲ್ಲಾ ದೇಶದ ಜನರನ್ನೂ ಇಲ್ಲಿ ನೋಡಬಹುದು.ವಿಶ್ವದ ದೊಡ್ಡ ಏರ್ ಪೋರ್ಟ್ ಗಳಲ್ಲಿ ಒಂದಾದ ಇಲ್ಲಿ ಒಂದು ಟರ್ಮಿನಲ್ ನಿಂದ ಇನ್ನೊಂದು ಟರ್ಮಿನಲ್ ಗೆ ಹೋಗಲು ಸ್ಕೈ ಟ್ರೈನ್ ವ್ಯವಸ್ಥೆ ಇದೆ. ಒಂದೊಂದು ಟರ್ಮಿನಲ್ ಗಳಲ್ಲೂ ಅನೇಕ ಗೇಟ್ ಗಳಿರುವುದರಿಂದ ಕಿಲೋಮೀಟರ್ ಗಟ್ಟಲೆ ನಡೆಯಬೇಕಾಗುತ್ತದೆ.ಪ್ರಯಾಣಿಕರ ಈ ತೋದರೆಯನ್ನು ನಿವಾರಿಸಲು ಎಸ್ಕಲೇಟರ್ (ಚಲಿಸುವ ಪಥ ಅಥವ ಸೋಪಾನ ಪಥ ಎನ್ನಬಹುದು)  ವ್ಯವಸ್ಥೆ ಮಾಡಿದ್ದಾರೆ. ಇದರಿಂದಾಗಿ ನಮ್ಮ ಲಗ್ಗೇಜುಗಳನ್ನು ಹಿಡಿದು ನಮ್ಮ ಗೇಟ್ ಬಳಿಗೆ ಹೋಗಲು ತುಂಬಾ ಸಹಾಯವಾಗುತ್ತದೆ.
ಸಾಮಾನ್ಯವಾಗಿ ಬೇರೆ ಯಾವುದೇ ವಿಮಾನ ನಿಲ್ದಾಣಗಳಲ್ಲಿ ನಾವು ಬಳಸುವ ಅಂತರ್ಜಾಲಕ್ಕೆ ದುಬಾರಿ ಬೆಲೆ ತೆರಬೇಕಾಗುತ್ತದೆ.  ಆದರೆ ಇಲ್ಲಿ ಇಂಟರ್ ನೆಟ್ ಬಳಸುವವರಿಗಾಗಿ ಉಚಿತ ಕಂಪ್ಯೂಟರ್ ವ್ಯವಸ್ಥೆ ಇದೆ. ಮಕ್ಕಳಿಗೆ ಸಮಯ ಕಳೆಯಲು ಆಟಗಳಿವೆ ಮತ್ತು ಶಾಪಿಂಗ್ ಮಾಡಲೂಬಹುದು. ಇಲ್ಲಿನ ಟಾಯ್ಲೆಟ್ ಮತ್ತು ಬಾತ್ ರೂಂ ಗಳ ಶುಚಿತ್ವದ ಬಗ್ಗೆಯಂತೂ ಎಷ್ಟು ವರ್ಣಿಸಿದರೂ ಕಡಿಮೆಯೇ. ಎತ್ತ ನೋಡಿದರೂ ಅಚ್ಚುಕಟ್ಟು ಎದ್ದು ಕಾಣುತ್ತದೆ. ಇದೇ ಸಿಂಗಪೂರ್ ನ ವಿಶೇಷತೆ.

ಇದು ಆಸ್ಟೇಲಿಯಾದ ಬ್ರಿಸ್ಬೇನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಒಳಗಿನ ಕೆಲವು ದೃಶ್ಯಾವಳಿಗಳು
  

ಇದು ಆಸ್ಟೇಲಿಯಾದ ಮೆಲ್ಬೋರ್ನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದ ಒಳಗಿನ ಕೆಲವು ದೃಶ್ಯಾವಳಿಗಳು

ಪ್ರಖ್ಯಾತ ಜ್ಯೋತಿಷಿಗಳಾದ ಶ್ರೀ ಸೋಮಯಾಜಿಯವರು ನಾವು ಹೊರಟ ವಿಮಾನದಲ್ಲಿ ಪ್ರಯಾಣಿಸಿದ್ದೊಂದು ವಿಶೇಷ.ಅವರೊಡನೆ ಮಾತನಾಡುವ ಅವಕಾಶ ನಮಗೆ ಇಲ್ಲಿ ಸಿಕ್ಕಿತು.

ಇದು ಆಸ್ಟೇಲಿಯಾದ ಟೌನ್ಸ್ವಿಲ್ ನ ಡೊಮೆಸ್ಟಿಕ್ ವಿಮಾನನಿಲ್ದಾಣದ ಒಳಗಿನ ಕೆಲವು ದೃಶ್ಯಾವಳಿಗಳು.ಇದು ನಮ್ಮ ಮಗಳಿರುವ ಸ್ಥಳವಾದ್ದರಿಂದ ಇಲ್ಲಿ ಕಾಲಿಡುತ್ತಿರುವಂತೆಯೇ ಒಂದು ರೀತಿಯ ಆತ್ಮೀಯ ಭಾವ ಮೂಡಿದ್ದು ಮಾತ್ರ ನಿಜ. ಹಾಗೆಯೇ ವಾಪಾಸಾಗುವಾಗ ಅಳಿಯ-ಮಗಳಿಗೆ ವಿದಾಯ ಹೇಳುವ ಸಮಯದಲ್ಲಿ ಕಣ್ತುಂಬಿ ಬಂದು ಎದೆ ಭಾರವಾಗಿತ್ತು.
4 ಕಾಮೆಂಟ್‌ಗಳು:

 1. ನಮಗಂತೂ ವಿದೇಶ ಪ್ರವಾಸದ ಯೋಗವಿಲ್ಲ ಅಕ್ಕ. ನಿಮ್ಮ ಪ್ರೀತಿಯ ಈ ಬ್ಲಾಗ್ ಪೋಸ್ಟ್ ಮೂಲಕ ನಾವು ಜಗತ್ತಿನ ಹಲವು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ದರ್ಶಣ ಮಾಡಿದಂತಾಯಿತು. ಒಳ್ಳೇ ಚಿತ್ರಗಳು. ಒಳ್ಳೆಯ ಸವಿವರ ಬರಹ.

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ಬದರಿಯವರೇ,
   ಮನಸ್ಸು ಮಾಡಿದರೆ ವಿದೇಶ ಪ್ರವಾಸವೇನು ಗಗನ ಕುಸುಮವಲ್ಲ.
   ಗಾದೆ ಮಾತೇ ಇದೆಯಲ್ಲ, ದೇಶ ಸುತ್ತಬೇಕು- ಕೋಶ ಓದಬೇಕು ಅಂತ.
   ಮನಸ್ಸು ಮಾಡಿ ಅಷ್ಟೇ.ನನ್ನ ಬ್ಲಾಗ್ ಬರಹಗಳನ್ನು ತಪ್ಪದೇ ಓದುತ್ತಿರುವ ನಿಮಗೆ
   ನನ್ನ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ.

   ಅಳಿಸಿ
 2. ಈ ಸುಂದರವಾದ ಛಾಯಾಚಿತ್ರಗಳನ್ನು ನೋಡಿದಾಗ ಹಾಗು ವಿವರಗಳನ್ನು ಓದಿದಾಗ ಅಚ್ಚರಿ ಮೂಡಿತು. It is really great!

  ಪ್ರತ್ಯುತ್ತರಅಳಿಸಿ
  ಪ್ರತ್ಯುತ್ತರಗಳು
  1. ನಿಮ್ಮ ಪ್ರೋತ್ಸಾಹ ನಿರಂತರವಾಗಿರಲಿ ಸಾರ್.ಧನ್ಯವಾದಗಳು.

   ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.