"ನನ್ನ ಮಗಳು- ನಾ ಕಂಡಂತೆ"

Facebook ಬಂದ ನಂತರ orkut.comನ ನಾವೆಲ್ಲರೂ ಮರೆತೇ ಬಿಟ್ಟಿದ್ದೇವೆ.....!!! ನಿನ್ನೆ ಆರ್ಕುಟ್ ನ ನನ್ನ profile ನೋಡುವ ಮನಸ್ಸಾಯಿತು....! ಅದ ನೋಡುತ್ತಾ ಹಳೆಯ ಸಿಹಿ ನೆನಪುಗಳು ಒಂದರ ನಂತರ ಮತ್ತೊಂದು ಮನಸೆಳೆಯಲು ಆರಂಭಿಸಿದವು. ನನ್ನ ಮಗಳ profile ವೀಕ್ಷಿಸುವಾಗ ಅವಳು ಬರೆದ ಕವನಗಳು ಮತ್ತು ನಾನು ಮತ್ತು ಗಿರೀಶ್ ಅವಳಿಗೆ ಬರೆದ Testimonial ಗಳು ನನ್ನನ್ನು ಆಕರ್ಷಿಸಿದವು....!ಅವುಗಳನ್ನು ನನ್ನ ಬ್ಲಾಗಿನಲ್ಲಿ ಹಂಚಿಕೊಳ್ಳುವ ಹಂಬಲವಾಯಿತು.
I LOVE YOU .......I LOVE YOU .......I LOVE YOU .......ಪುಟ್ಟು!!!!!!!






ನಾನು ಮತ್ತು ಗಿರೀಶ್ ಅವಳಿಗೆ ಬರೆದ Testimonial ಗಳು

Dec 17, 2009

"ನನ್ನ ಮಗಳು- ನಾ ಕಂಡಂತೆ"

ಈಗಲೂ ಮನೆಮಂದಿಗೆಲ್ಲ ಪುಟ್ಟು ಇವಳು.ಒಬ್ಬಳೇ ಮಗಳೆಂಬ ಅಹಂಭಾವ ನನ್ನ ಮಗಳಿಗಿಲ್ಲ. ಮಮತೆ, ಮುದ್ದಿನಲ್ಲೇ ಬೆಳೆದರೂ ಶಿಸ್ತನ್ನು ಮರೆತವಳಲ್ಲ. ಆಕಾಶಕ್ಕೆ ಏಣಿ ಹಾಕುವ ಸ್ವಭಾವವಲ್ಲ. ವಾಸ್ತವಿಕತೆಯ ಅರಿವಿದೆ. ಆದರೆ ತನ್ನ ಯೋಗ್ಯತೆಗೆ ನಿಲುಕುವ ಪ್ರತಿಯೊಂದಕ್ಕೂ ಕೈ ಚಾಚುವ ಮತ್ತು ಅದನ್ನು ತನ್ನದಾಗಿಸಿಕೊಳ್ಳಲು ಮುಂದಾಗುವ ಆತ್ಮವಿಶ್ವಾಸವಿದೆ. ಬೇರೆಯವರ ನೋವಿಗೆ ಸ್ಪಂದಿಸುವ ಮನಸ್ಸಿದೆ. ದೇವರು, ಹಿರಿಯರೆಂದರೆ ಗೌರವವಿದೆ. ಆದರೆ ಯಾವುದೇ ತೋರ್ಪಡಿಕೆಯನ್ನು ಇಷ್ಟಪಡುವುದಿಲ್ಲ. ಆಭರಣಗಳ ಮೇಲಿನ ಮೋಹಕ್ಕಿಂತ ತರಾವರಿ ಡ್ರೆಸ್ ಗಳನ್ನು ಹಾಕಿಕೊಳ್ಳುವುದೇ ಅಚ್ಚುಮೆಚ್ಚು. ದೇಶ-ವಿದೇಶ ಸುತ್ತುವ ಹಂಬಲ.ಚಿತ್ರಕಲೆ, ನಾಣ್ಯ ಸಂಗ್ರಹಣೆಯ ಅಚ್ಚುಮೆಚ್ಚಿನ ಹವ್ಯಾಸವಿದೆ. ಯಾವುದೇ ಕೆಲಸವನ್ನು ತನ್ನ ಸ್ವಂತ ಆಲೋಚನೆಯ ಮೂಲಕ ಬೇರೆಯವರಿಗಿಂತ ಭಿನ್ನವಾಗಿ ಮಾಡುವ ತಾಕತ್ತಿದೆ. ಚಿಕ್ಕವಳಿದ್ದಾಗಿಂದ ನನ್ನ ಮಗಳು ಬೇರೆಯವರಿಗೆ ಮಾದರಿಯಾಗಿದ್ದಾಳೆ ಎಂಬುದು ನಮಗೆ ಹೆಮ್ಮೆಯ ಸಂಗತಿ. ಗಿರೀಶ್ ಹೇಳಿದಂತೆ ಪಾನಿಪೂರಿ ಪ್ರಿಯೆ, ಷಾಪಿಂಗ್ ಅಂದ್ರೆ ರೆಡಿ.

ಬೆಳಗ್ಗೆ ಬೇಗ ಏಳುವುದೆಂದರೆ ಆಗದು. ಆದರೆ ಎದ್ದ ನಂತರ ಎಲ್ಲಾಕೆಲಸವೂ ಚಕಾಚಕ್ ಎಂದು ಮುಗಿಸಿಬಿಡಬೇಕು.ಸ್ವಲ್ಪ ಮುಂಗೋಪಿ. ಕೋಪ ಹೆಚ್ಚು ಹೊತ್ತಿರುವುದಿಲ್ಲ ಎಂಬುದು ಸಮಾಧಾನದ ವಿಷಯ.

ಸ್ಮಿತಾ - ನಮ್ಮ ಮನ-ಮನೆಯ ಸಿಂಗಾರ.ನಮ್ಮ ಬಾಳ ಬಂಗಾರ.
ನಿಮ್ಮ ಬದುಕಾಗಿರಲಿ ಮಧುರ.... ಮಧುರ....ಮಧುರ....


- Nov 18, 2009
Here is my testi for my dearest Smitha urf smi, simi, smith, smiz, grishmi...... is my cutest wife. Good things about her are she is very understanding,patient,adjusting and always cheerfull, but bad thing is she gets very cranky atleast once a day like every women on this earth:). Hogs for shopping, cant stay a day without thinking of shopping, next moment my mind calculates how many extra teeth I have to pull to fulfill her requirements☺.She wants Pani Puri in Townsville, I don’t know from where to get???. Smi and I have been married for four months. It's been a good, arranged marriage. We are getting to know each other well, everyday is a new day for us. But I have noticed all good qualities, a woman should have to handle a happy married life. Before I made up my mind to marry smi,many people told me she is the only daughter in her family so will be over pampered,demanding,dominating etc etc etc. I did not see 0.1% of such attitude in her. I must say that I am proud to be part of her family.LOVE U SMI..

4 ಕಾಮೆಂಟ್‌ಗಳು:

  1. ಸ್ಮಿತಾ ಬರೆದ ಕವನಗಳನ್ನು ಓದಿ ಖುಶಿಯಾಯಿತು. ತಂದೆ, ತಾಯಿ, ಗೆಳತಿಯರು, ಪತಿ ಇವರೆಲ್ಲರೊಡನೆ ಇವಳಿಗೆ ಎಷ್ಟು ಪ್ರೀತಿ ಇದೆಯಲ್ಲ! ಜೀವನಪ್ರೀತಿಯ ಈ ಹುಡುಗಿಯ ಬಾಳಿನಲ್ಲಿ ಖುಶಿಯೇ ತುಂಬಿರಲಿ ಎಂದು ಹಾರೈಸುತ್ತೇನೆ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ನಿಮ್ಮ ಮನದುಂಬಿದ ಹಾರೈಕೆಗೆ ಧನ್ಯವಾದಗಳು ಸಾರ್.........

      ಅಳಿಸಿ
  2. ನೆನಪುಗಳ ಮಾತೇ ಮಧುರ ಅಲ್ಲವೇ!
    ಸ್ಮಿತಾರದ್ದೂ ಬ್ಲಾಗ್ ಇದ್ದರೆ ಲಿಂಕ್ ಕೊಡಿ.

    ಪ್ರತ್ಯುತ್ತರಅಳಿಸಿ
    ಪ್ರತ್ಯುತ್ತರಗಳು
    1. ಧನ್ಯವಾದಗಳು..... ನನ್ನ ಮಗಳ ಬ್ಲಾಗ್ ಸಧ್ಯಕ್ಕಿಲ್ಲ........ಬ್ಲಾಗ್ ಮಾಡಿದರೆ ನಿಮಗೆ ಲಿಂಕ್ ಕೊಡುವುದನ್ನು ನಾನು ಮರೆಯುವುದಿಲ್ಲ ಬದರಿನಾಥ್........!! Thank you.....

      ಅಳಿಸಿ

ನಿಮ್ಮ ಅಮೂಲ್ಯವಾದ ಸಲಹೆ ಮತ್ತು ಅಭಿಪ್ರಾಯಗಳಿಗೆ ಸದಾ ಸ್ವಾಗತವಿದೆ.